ರಿಚರ್ಡ್ ಬರ್ಟನ್ (ನವೆಂಬರ್ ೧೦, ೧೯೨೫ – ಆಗಸ್ಟ್ ೫, ೧೯೮೪) ವೇಲ್ಸ್ ಮೂಲದ ಹಾಲಿವುಡ್ ಚಲನಚಿತ್ರ ನಟರು. 'ಕ್ಲಿಯೊಪಾತ್ರ' ಚಿತ್ರದಲ್ಲಿ ಸುಪ್ರಸಿದ್ಧ ಎಲಿಜಬೆಥ್ ಟೇಲರ್ ಜೊತೆ ಅತ್ಯಂತ ಸಮರ್ಪಕವಾದ ಅಭಿನಯ ನೀಡಿದ್ದಾರೆ. ಎಲಿಜಬೆಥ್ ಟೇಲರ್ ರಿಚರ್ಡ್ ಬರ್ಟನ್ ರ ಪತ್ನಿ. ರಿಚರ್ಡ್ ಬರ್ಟನ್ ಆಕೆಯನ್ನೇ ಮರುಮದುವೆಯಾಗಿ ಚಿತ್ರರಂಗದಲ್ಲಿ ಸುದ್ದಿಮಾಡಿದ್ದರು. 'ಟೇಮಿಂಗ್ ಆಫ್ ದ ಶ್ರೂ,' 'ವೇರ್ ಈಗಲ್ಸ್ ಡೇರ್', ಮುಂತಾದ ಜನಪ್ರಿಯ ಚಲನ ಚಿತ್ರಗಳಲ್ಲಿ ನಟಿಸಿದ್ದಾರೆ.